Mysuru, Sept 5: Teacher’s Day was celebrated herein Rashtrotthana Vidya Kendra – Srinagar by offering greeting cards and flowers made by children to teachers and seeking their blessings. Principal Smt. Anita exemplifies the qualities of an ideal teacher, while the life accomplishments of S. Radhakrishnan were commemorated through the offering of flowers at his portrait.In the afternoon, the educators and administration of Rashtrotthana Vidya Kendra – Vijayanagara and Rashtrotthana Vidya Kendra – Srinagar jointly commemorated Teacher’s Day. The event was honoured by the presence of Sri Hanumanthachar Joshi, Principal of Sharada Vilas Polytechnic College in Mysuru. Flowers were offered at the portrait of S. Radhakrishnan by the attendees. Sri Hanumanthachar elaborated on the qualities of an ideal teacher. The teachers were presented with gifts in recognition of their contributions.Singing, drama and dances were organised. Also, teams were formed to play Information Treasure Hunt.
ಮೈಸೂರು, ಸಪ್ಟೆಂಬರ್ 5: ಮಕ್ಕಳೇ ತಯಾರಿಸಿದ ಶುಭಾಶಯಗಳ ಕಾರ್ಡನ್ನು ಮತ್ತು ಹೂವುಗಳನ್ನು ಶಿಕ್ಷಕರಿಗೆ ನೀಡಿ ಅವರ ಆಶೀರ್ವಾದವನ್ನು ಪಡೆಯುವ ಮೂಲಕ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಅವರು ಆದರ್ಶ ಶಿಕ್ಷಕ ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಧಾಕೃಷ್ಣನ್ ಅವರ ಜೀವನ ಸಾಧನೆಗಳನ್ನು ತಿಳಿಸಿಕೊಟ್ಟರು. ಮಧ್ಯಾಹ್ನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ವಿಜಯನಗರ ಮತ್ತು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಶ್ರೀನಗರದ ಶಾಲೆಯ ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ಸೇರಿ ಶಿಕ್ಷಕ ದಿನಾಚರಣೆಯನ್ನು ಆಚರಿಸಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶ್ರೀ ಹನುಮಂತಚಾರ್ ಜೋಷಿ, ಪ್ರಾಂಶುಪಾಲರು, ಶಾರದಾ ವಿಲಾಸ್ ಪಾಲಿಟೆಕ್ನಿಕ್ ಕಾಲೇಜ್ ಮೈಸೂರು, ಅವರು ಆಗಮಿಸಿದ್ದರು. ಗಣ್ಯರು ಎಸ್. ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ಅತಿಥಿಗಳು ಆದರ್ಶ ಶಿಕ್ಷಕರು ಹೇಗಿರಬೇಕೆಂದು ತಿಳಿಸಿಕೊಟ್ಟರು. ಶಿಕ್ಷಕರಿಗೆ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.ಗಾಯನ, ನಾಟಕ, ನೃತ್ಯಗಳನ್ನು ಆಯೋಜಿಸಲಾಗಿತ್ತು. ‘ಮಾಹಿತಿ ಖಜಾನೆ ಹುಡುಕು’ ಆಟಕ್ಕೆ ತಂಡಗಳನ್ನು ರಚಿಸಿ ಆಡಿಸಲಾಯಿತು.