Mysuru, Oct 14: A teacher rejuvenation camp was organized herein Rashtrotthana Vidya Kendra – Srinagar. Teachers from Vijayanagara, Mangaluru and Srinagar schools participated in the workshop.
1st day:
Then divided into subject-wise sections, the head of the section informed about the lesson plan and molecular teaching. A teacher who teaches students was told about the benefits of lesson planning and how important lesson planning is for teachers to develop more subject knowledge. In addition to this, all the subject department heads told in detail that core teaching is an important method of instilling confidence in the teacher.Moreover, the Kindergarten teacher subject wise leaders gave more guidance according to their subjects and also guided the gathered teachers by discussing their knowledge.The subject heads who were present also guided the teachers present by discussing with fellow learned teachers according to their subject and getting this information from the teachers.
Second Day:
At the beginning of the program, Sri Girish gave a brief introduction of Birsamunda and told about his mission, India, Indian culture and told the gathered teachers that we are all Indians, we are all Indians, we have the determination to work hard, let all our attitudes be ours.In addition, about Man of Steel Sardar Vallabhai Patil, was told.Smt. Vidya Kamath of Mangalore School presented the topic of progress and backwardness in the child’s reading and effective communication and discussed the learning disability in the student and ways to reduce it.Sri Nagaraj also informed about teacher’s performance that activity-based teaching is more effective than teacher’s role lecture teaching for all-round development of students. Also, present day experiences were heard from Srinagar, Vijayanagar and Mangalore school teachers present.
ಮೈಸೂರು, ಅಕ್ಟೋಬರ್ 14-15: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಶ್ರೀನಗರದಲ್ಲಿ ಶಿಕ್ಷಕರ ಪುನಶ್ಚೇತನ ಶಿಬಿರವನ್ನು ಏರ್ಪಡಿಸಲಾಯಿತು. ಕಾರ್ಯಾಗಾರದಲ್ಲಿ ವಿಜಯನಗರ, ಮಂಗಳೂರು ಮತ್ತು ಶ್ರೀನಗರ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.
ಮೊದಲನೆ ದಿನ:
ಶಿವರಾಜ್ ಗುರೂಜಿಯವರು ಪ್ರಾಸ್ತಾವಿಕ ನುಡಿಯಲ್ಲಿ ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯವನ್ನು ಅರಿತು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡುವ ಪ್ರಮುಖ ಅಂಶಗಳ ಬಗ್ಗೆ ತಿಳಿಸಿ ಕೊಟ್ಟರು.ನಂತರ ವಿಷಯವಾರು ವಿಭಾಗಗಳಾಗಿ ವಿಂಗಡಿಸಿ ವಿಭಾಗ ಮುಖ್ಯಸ್ಥರಿಂದ ಪಾಠ ಯೋಜನೆ ಮತ್ತು ಅಣು ಬೋಧನೆಯ ಬಗ್ಗೆ ತಿಳಿಸಿಕೊಡಲಾಯಿತು. ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಒಬ್ಬ ಶಿಕ್ಷಕನಿಗೆ ಪಾಠ ಯೋಜನೆಯಿಂದ ಆಗುವ ಪ್ರಯೋಜನಗಳು ಹಾಗೂ ಶಿಕ್ಷಕರಿಗೆ ಹೆಚ್ಚಿನ ವಿಷಯ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಲು ಪಾಠಯೋಜನೆಯು ಅತಿ ಮುಖ್ಯ ಎಂಬುದರ ಬಗ್ಗೆ ತಿಳಿಸಿಕೊಟ್ಟರು. ಇದರ ಜೊತೆಗೆ ಅಣು ಬೋಧನೆಯು ಶಿಕ್ಷಕನಿಗೆ ಆತ್ಮಸ್ಥೈರ್ಯವನ್ನು ತುಂಬುವ ಒಂದು ಪ್ರಮುಖ ವಿಧಾನ ಎಂಬುದನ್ನು ಸ್ವ ವಿವರವಾಗಿ ಎಲ್ಲಾ ವಿಷಯ ವಿಭಾಗ ಮುಖ್ಯಸ್ಥರು ತಿಳಿಸಿಕೊಟ್ಟರು. ಇದಲ್ಲದೇ ಶಿಶುವಿಹಾರ ಶಿಕ್ಷಕ ವಿಷಯವಾರು ಮುಖ್ಯಸ್ಥರು ಅವರ ವಿಷಯಗಳಿಗೆ ಅನುಗುಣವಾಗಿ ಹೆಚ್ಚಿನ ಮಾರ್ಗದರ್ಶನ ನೀಡುವುದರ ಜೊತೆಗೆ ತಮ್ಮಲ್ಲಿರುವಂತಹ ಜ್ಞಾನವನ್ನು ಚರ್ಚಿಸುತ್ತಾ ನೆರೆದಿದ್ದ ಶಿಕ್ಷಕರಿಗೆ ಮಾರ್ಗದರ್ಶನ ಕೊಟ್ಟರು.ಸಹ ವಿದ್ವತ್ಪೂರ್ಣ ಶಿಕ್ಷಕರು ಅವರವರ ವಿಷಯಕ್ಕೆ ತಕ್ಕಂತೆ ಚರ್ಚಿಸುತ್ತಾ ಶಿಕ್ಷಕರಿಂದ ಈ ಮಾಹಿತಿಯನ್ನು ಪಡೆಯುತ್ತಾ ನೆರೆದಿದ್ದಂತಹ ವಿಷಯ ಮುಖ್ಯಸ್ಥರುಗಳು ಅಲ್ಲಿರುವ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು.
ಎರಡನೆ ದಿನ:
ಕಾರ್ಯಕ್ರಮದಲ್ಲಿ ಮೊದಲಿಗೆ ಶ್ರೀ ಗಿರೀಶ್ ಅವರು ಬೀರ್ಸಾಮುಂಡ ರವರ ಕಿರುಪರಿಚಯದೊಂದಿಗೆ ಅವರ ಧ್ಯೇಯ ಮಾರ್ಗ ಹಾಗೂ ಭಾರತ, ಭಾರತದ ಸಂಸ್ಕೃತಿಯ ಬಗ್ಗೆ ತಿಳಿಸುತ್ತಾ ಬನವಾಸಿ, ಗ್ರಾಮವಾಸಿ, ನಗರವಾಸಿ, ನಾವೆಲ್ಲರೂ ಭಾರತ ವಾಸಿಗಳು, ದುಡಿಯುವ ಮಡಿಯುವ ಸಂಕಲ್ಪ, ನಮ್ಮೆಲ್ಲ ಮನೋಭಾವಗಳು ನಮ್ಮದಾಗಲಿ ಎಂಬ ಹೇಳಿಕೆಯನ್ನು ನೆರೆದಿದ್ದ ಶಿಕ್ಷಕರಿಗೆ ತಿಳಿಸಿಕೊಟ್ಟರು.
ಇದರ ಜೊತೆಗೆ ಉಕ್ಕಿನ ಮನುಷ್ಯನಾದಂತಹ ಸರದಾರ್ ವಲ್ಲಭಾಯಿ ಪಾಟೀಲ್ ಅವರ ಬಗ್ಗೆ ತಿಳಿಸಿಕೊಡಲಾಯಿತು. ಮಂಗಳೂರು ಶಾಲೆಯ ವಿದ್ಯಾ ಕಾಮತ್ ಅವರು ಮಗುವಿನ ಓದಿನಲ್ಲಿ ಮುನ್ನಡೆ ಮತ್ತು ಹಿನ್ನಡೆ ಹಾಗೂ ಪ್ರಭಾವ ಯುಕ್ತ ಸಂವಹನ ವಿಷಯ ಮಂಡಿಸುವ ಮೂಲಕ ವಿದ್ಯಾರ್ಥಿಯಲ್ಲಿನ ಕಲಿಕಾ ನ್ಯೂನತೆಯನ್ನು ಮತ್ತು ಅದನ್ನು ಕಡಿಮೆಗೊಳಿಸುವ ಮಾರ್ಗೋಪಾಯಗಳನ್ನು ಚರ್ಚಿಸಲಾಯಿತು. ಅಲ್ಲದೆ ಹಿಂದಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆ ಇಲ್ಲದ ಶಿಕ್ಷಣ ವ್ಯರ್ಥ. ಆದ್ದರಿಂದ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಸದ್ಬಳಕೆಯನ್ನು ಮಾಡಿಕೊಳ್ಳುವುದು ಅವಶ್ಯಕ ಎಂಬ ಮಾಹಿತಿಯನ್ನು ಶ್ರೀಮತಿ ಪುಷ್ಪಲತಾ ಅವರು ತಿಳಿಸಿಕೊಟ್ಟರು. ಶಿಕ್ಷಕರ ಕಾರ್ಯಕ್ಷಮತೆ ಕುರಿತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯನ್ನು ಶಿಕ್ಷಕರ ಪಾತ್ರ ಉಪನ್ಯಾಸ ಬೋಧನೆಗಿಂತ ಚಟುವಟಿಕೆ ಯುಕ್ತ ಬೋಧನೆ ಬಹಳ ಪರಿಣಾಮಕಾರಿ ಎಂಬುದನ್ನು ಕೂಡ ಶ್ರೀ ನಾಗರಾಜ್ ಅವರು ತಿಳಿಸಿಕೊಟ್ಟರು. ಅಲ್ಲದೆ ನೆರೆದಿದ್ದ ಶ್ರೀನಗರ, ವಿಜಯನಗರ ಮತ್ತು ಮಂಗಳೂರು ಶಾಲೆಯ ಶಿಕ್ಷಕರಿಂದ ಇಂದಿನ ದಿನದ ಅನುಭವಗಳನ್ನು ಕೇಳಲಾಯಿತು.