Mysuru, Sept 14: “Future leaders of India must be chosen from our schools; Should be leaders of society; They should become a model politician” said Sri Shivraj, who arrived as the chief guest at the swearing-in ceremony herein Rashtrotthana Vidya Kendra – Srinagar. First, Smt. Nandini, the school election officer, explained the process of the school election step by step. Later, the guests gave badges to the leaders and vice-leaders of Jal, Prithvi, Vayu, Agni teams selected in the elections and preached the oath ceremony. Badges were also given to elected leaders in school elections. School President, Vice President, Education Minister, Health Minister, Sanitation Minister, Environment Minister, Sports Minister, Culture Minister were administered oath. All team mentors were present.
ಮೈಸೂರು, ಸಪ್ಟೆಂಬರ್ 14: “ಭವಿಷ್ಯ ಭಾರತದ ನಾಯಕರುಗಳು ನಮ್ಮ ಶಾಲೆಯಿಂದಲೇ ಆಯ್ಕೆಯಾಗಬೇಕು; ಸಮಾಜದ ನಾಯಕರಾಗಿರಬೇಕು; ಮುಂದೆ ಮಾದರಿಯ ರಾಜಕಾರಣಿ ಆಗಬೇಕು” ಎನ್ನುವ ಮಾತನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಪ್ರತಿಜ್ಞಾ ಸ್ವೀಕಾರ ದಿವಸ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಶಿವರಾಜ್ ಅವರು ಹೇಳಿದರು. ಮೊದಲಿಗೆ ಶಾಲಾ ಚುನಾವಣಾ ಅಧಿಕಾರಿಗಳಾದ ಶ್ರೀಮತಿ ನಂದಿನಿ ಅವರು ಶಾಲಾ ಚುನಾವಣೆ ನಡೆದ ಪ್ರಕ್ರಿಯೆಯನ್ನು ಹಂತ ಹಂತವಾಗಿ ತಿಳಿಸಿ ಕೊಟ್ಟರು. ಬಳಿಕ ಚುನಾವಣೆಯಲ್ಲಿ ಆಯ್ಕೆಯಾದ ಜಲ, ಪೃಥ್ವಿ, ವಾಯು, ಅಗ್ನಿ ತಂಡದ ನಾಯಕರು ಮತ್ತು ಉಪನಾಯಕರುಗಳಿಗೆ ಅತಿಥಿಗಳು ಬ್ಯಾಡ್ಜಗಳನ್ನು ನೀಡಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಾಲಾ ಚುನಾವಣೆಯಲ್ಲಿ ಆಯ್ಕೆಯಾದ ನಾಯಕರುಗಳಿಗೂ ಸಹ ಬ್ಯಾಡ್ಜ್ ಗಳನ್ನು ನೀಡಲಾಯಿತು. ಶಾಲಾ ಅಧ್ಯಕ್ಷರು, ಉಪಾಧ್ಯಕ್ಷರು, ಶಿಕ್ಷಣ ಸಚಿವರು, ಆರೋಗ್ಯ ಸಚಿವರು, ಸ್ವಚ್ಛತಾ ಸಚಿವರು, ಪರಿಸರ ಸಚಿವರು, ಕ್ರೀಡಾ ಸಚಿವರು, ಸಾಂಸ್ಕೃತಿಕ ಸಚಿವರಿಗೆ ಪ್ರಮಾಣ ವಚನ ಬೋಧಿಸಲಾಯಿತು. ಎಲ್ಲಾ ತಂಡದ ಮಾರ್ಗದರ್ಶಕರು ಉಪಸ್ಥಿತರಿದ್ದರು.