Mysuru, Sept. 9: Krishna Janmashtami was celebrated at Rashtrotthana Vidya Kendra – Srinagar.
- The event commenced with a welcome extended to the children of Gokulam dressed as little Krishnas and Radhas by offering them flowers.
- The school principal inaugurated the program with traditional rituals, the lighting of the lamp, and Aarati, accompanied by melodious Krishna bhajans.
- Subsequently, an idol of Lord Krishna was placed in a decorated cradle, and the traditional ‘thottilu-tugu’ ceremony was performed amidst the singing of devotional songs.
- The children of Gokulam presented a short play depicting the birth of Lord Krishna.
- Colourful dance performances were presented by the children from Gokulam and the primary school.
- The little ones enthusiastically participated in traditional activities such as the Mosaru Kudike (breaking the curd pot) and the ‘Toddling Krishna’ event.
- Parents watched the proceedings.
- The celebration concluded with the distribution of Prasada to the children and staff.
ಮೈಸೂರು, ಸೆ. 9: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
- ಚಿಣ್ಣರ ಕೃಷ್ಣ ಮತ್ತು ರಾಧೆಯರ ವೇಷಭೂಷಣದಲ್ಲಿ ಆಗಮಿಸಿದ ಗೋಕುಲಂನ ಮಕ್ಕಳನ್ನು ಹೂವುಗಳನ್ನು ನೀಡಿ ಸ್ವಾಗತಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
- ಶಾಲೆಯ ಪ್ರಧಾನಾಚಾರ್ಯರು ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು, ದೀಪ ಬೆಳಗುವಿಕೆ ಮತ್ತು ಆರತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
- ಈ ಸಂದರ್ಭದಲ್ಲಿ ಮಧುರ ಕೃಷ್ಣ ಭಜನೆಗಳನ್ನು ಹಾಡಲಾಯಿತು.
- ನಂತರ, ಅಲಂಕರಿಸಿದ ತೊಟ್ಟಿಲಿನಲ್ಲಿ ಶ್ರೀಕೃಷ್ಣನ ಮೂರ್ತಿಯನ್ನು ಇರಿಸಿ, ಭಕ್ತಿಗೀತೆಗಳ ಗಾಯನದೊಂದಿಗೆ ಸಾಂಪ್ರದಾಯಿಕ ತೊಟ್ಟಿಲು ತೂಗುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
- ಗೋಕುಲಂನ ಮಕ್ಕಳು ಶ್ರೀಕೃಷ್ಣನ ಜನನವನ್ನು ಬಿಂಬಿಸುವ ಕಿರುನಾಟಕವನ್ನು ಪ್ರದರ್ಶಿಸಿದರು.
- ಗೋಕುಲಂ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಂದ ವರ್ಣರಂಜಿತ ನೃತ್ಯ ಪ್ರದರ್ಶನಗಳು ನಡೆದವು.
- ಮೊಸರು ಕುಡಿಕೆ ಒಡೆಯುವುದು ಮತ್ತು ‘ತೊದಲು ನಡಿಗೆಯ ಕೃಷ್ಣ’ನಂತಹ ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಪುಟ್ಟ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
- ಪೋಷಕರು ಕಾರ್ಯಕ್ರಮವನ್ನು ವೀಕ್ಷಿಸಿದರು.
- ಮಕ್ಕಳು ಮತ್ತು ಸಿಬ್ಬಂದಿಗೆ ಪ್ರಸಾದ ವಿತರಿಸುವ ಮೂಲಕ ಆಚರಣೆಯು ಸಂಪನ್ನಗೊಂಡಿತು.




