Mysuru, A. 22: A special program called “Light of rope for everyday life” was organised at Rashtrotthana Vidya Kendra – Srinagar. In the program, Dr. Sitarama couples melodiously sang selected kaggas, explaining their meaning and significance in daily life in simple terms. He said that Mankuthimman Kagga is known as the “Bhagavad Gita of Kannada” and it provides guidance for stress management, appropriate decision-making, and a meaningful life. The students read the verses they had prepared and explained their meaning. This boosted the interest in Kannada literature, thinking power and expressive skills.
ಮೈಸೂರು, ಆ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ “ನಿತ್ಯದ ಬದುಕಿಗೆ ಕಗ್ಗದ ಬೆಳಕು” ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸೀತಾರಾಮ ದಂಪತಿಗಳು ಆಯ್ದ ಕಗ್ಗಗಳನ್ನು ಸುಮಧುರವಾಗಿ ಹಾಡಿ, ಅವುಗಳ ಅರ್ಥ ಮತ್ತು ನಿತ್ಯಜೀವನದಲ್ಲಿನ ಮಹತ್ವವನ್ನು ಸರಳವಾಗಿ ವಿವರಿಸಿದರು. ಮಂಕುತಿಮ್ಮನ ಕಗ್ಗವನ್ನು “ಕನ್ನಡದ ಭಗವದ್ಗೀತೆ” ಎಂದು ಕರೆಯಲಾಗುತ್ತಿದ್ದು, ಅದು ಒತ್ತಡ ನಿರ್ವಹಣೆ, ಸೂಕ್ತ ತೀರ್ಮಾನ ಹಾಗೂ ಸಾರ್ಥಕ ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಾವು ಸಿದ್ಧಪಡಿಸಿಕೊಂಡ ಕಗ್ಗಗಳನ್ನು ವಾಚಿಸಿ ಅವುಗಳ ಅರ್ಥವನ್ನು ವಿವರಿಸಿದರು. ಇದರಿಂದ ಕನ್ನಡ ಸಾಹಿತ್ಯದ ಆಸಕ್ತಿ, ಚಿಂತನಾಶಕ್ತಿ ಹಾಗೂ ಅಭಿವ್ಯಕ್ತಿ ಕೌಶಲಗಳಿಗೆ ಉತ್ತೇಜನ ದೊರೆಯಿತು.








