Mysuru, June 24: The swearing-in ceremony was held herein Rashtrotthana Vidya Kendra – Srinagar. Sri Harish Shenoy and members of the Management Board were the chief guests. The school’s Election Officer, Smt. Nandini, briefed the gathering about the election process. Sri Harish Shenoy and Smt. Anitha presented badges and belts to the newly elected student leaders, after which they were administered the oath by Sri Harish Shenoy. In his address, Sri Shenoy asked the students to lead with honesty and dedication. He highlighted the importance of responsibility, discipline and strong moral values. He appreciated the importance the school has given to nationalism and cultural heritage.
ಮೈಸೂರು, ಜೂ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಅಧಿಕಾರ ಸ್ವೀಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಶ್ರೀ ಹರೀಶ್ ಶೆಣೈ, ಆಡಳಿತ ಮಂಡಳಿ ಸದಸ್ಯರು ಇವರು ಆಗಮಿಸಿದ್ದರು. ಶಾಲೆಯ ಚುನಾವಣಾ ಅಧಿಕಾರಿ ಶ್ರೀಮತಿ ನಂದಿನಿ ಅವರು ಚುನಾವಣಾ ಪ್ರಕ್ರಿಯೆಯ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಶ್ರೀ ಹರೀಶ್ ಶೆಣೈ ಮತ್ತು ಶ್ರೀಮತಿ ಅನಿತಾ ಅವರು ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ಮತ್ತು ಬೆಲ್ಟ್‌ಗಳನ್ನು ಪ್ರದಾನ ಮಾಡಿದರು, ನಂತರ ಅವರು ಶ್ರೀ ಹರೀಶ್ ಶೆಣೈ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ತಮ್ಮ ಭಾಷಣದಲ್ಲಿ, ಶ್ರೀ ಶೇಣೈ ಅವರು ವಿದ್ಯಾರ್ಥಿಗಳು ಪ್ರಾಮಾಣಿಕತೆ ಮತ್ತು ಸಮರ್ಪಣೆಯೊಂದಿಗೆ ನಾಯಕತ್ವದ ನಿರ್ವಹಿಸಲು ಹೇಳಿದರು. ಜವಾಬ್ದಾರಿ, ಶಿಸ್ತು ಮತ್ತು ಬಲವಾದ ನೈತಿಕ ಮೌಲ್ಯಗಳ ಮಹತ್ವವನ್ನು ಎತ್ತಿ ತೋರಿಸಿದರು. ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲೆ ಶಾಲೆಯು ನೀಡಿರುವ ಮಹತ್ವವನ್ನು ಅವರು ಶ್ಲಾಘಿಸಿದರು.