Mysuru, Aug 23: At the Sri Krishna Janmashtami celebration held herein Rashtrotthana Vidya Kendra – Srinagar, mothers portrayed as Yashoda and students dressed as Krishna and Radha were observed reverently honouring Lord Krishna.The program was started by lighting the lamp and laying flowers.The parents and students were informed about the mythological background of Krishna and the importance of Krishna Janmashtami and tying the pots with a rope in the school premises children played the game of breaking the pots.
ಮೈಸೂರು, ಆಗಸ್ಟ್ 23: ತಾಯಂದಿರು ಯಶೋದೆಯ ವೇಷದಲ್ಲಿ ಹಾಗೂ ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯ ವೇಷ ದಲ್ಲಿದ್ದು ಕೃಷ್ಣನನ್ನು ಆರಾಧಿಸುತ್ತಾ, ಕೃಷ್ಣನನ್ನು ಪೂಜಿಸುವ ದೃಶ್ಯವನ್ನು ಶ್ರೀನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯಂದು ನೋಡಬಹುದಾಗಿತ್ತು. ದೀಪ ಪ್ರಜ್ವಲಿಸಿ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪೋಷಕ ಹಾಗೂ ವಿದ್ಯಾರ್ಥಿ ವೃಂದಕ್ಕೆ ಕೃಷ್ಣನ ಪುರಾಣ ಹಿನ್ನೆಲೆ ಹಾಗೂ ಕೃಷ್ಣ ಜನ್ಮಾಷ್ಟಮಿ ಮಹತ್ವವನ್ನು ತಿಳಿಸಿ ಶಾಲೆಯ ಆವರಣದಲ್ಲಿ ಮಡಕೆಗಳನ್ನು ಹಗ್ಗದಿಂದ ಬಿಗಿದು ಮಕ್ಕಳಿಗೆ ಆಟವನ್ನು ಆಡಿಸುವ ಮೂಲಕ ಮಡಕೆಗಳನ್ನು ಒಡೆಯಲಾಯಿತು.