Feb. 24: Mahashivratri was celebrated herein Rashtrotthana Vidya Kendra – Srinagar Smt. Purnima and Smt. Nandini performed the folk song ‘Betta Nudi Dao Madeva Bidiru Nudi Dao’ and Pradhanacharya Smt. Anita performed the puja rituals. Smt. Shubhamangala and Smt. Srilakshmiji performed the Shivastuti song ‘Prabhumprananatham Vibhumvishwanatham’. The significance of the day was explained by Smt. Hansa. Then the Pradhanacharya performed the traditional puja. Several cultural programmes were held including dance performances and instrumental jugalbandi by renowned tabla player Sri Parameshwara Hegde and Mridangam player Sri Venkataramana. The student Vidhatri sang the Shiva Stotra with devotion. Children of the second class sang the song ‘Shivanu Nidubare’. Manohar, the school’s Kannada teacher, performed the Shiva Tandava dance with the sixth-grade students. The programme concluded with the distribution of prasad to all the students, teaching and non-teaching staff.
ಮೈಸೂರು, ಫೆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಮಹಾಶಿವರಾತ್ರಿಯನ್ನು ಆಚರಿಸಲಾಯಿತು. ಶ್ರೀಮತಿ ಪೂರ್ಣಿಮಾ ಹಾಗೂ ಶ್ರೀಮತಿ ನಂದಿನಿ ಅವರು ‘ಬೆಟ್ಟ ನುಡಿದಾವೋ ಮಾದೇವ ಬಿದಿರು ನುಡಿದಾವೋ’ ಜನಪದಗೀತೆ ಪ್ರಸ್ತುತಿಯೊಂದಿಗೆ ಪ್ರಧಾನಾಚಾರ್ಯ ಅನಿತ ಅವರು ಪೂಜಾಕೈಂಕರ್ಯಗಳನ್ನು ನೆರವೇರಿಸಿದರು. ಶುಭಮಂಗಳ ಮತ್ತು ಶ್ರೀ ಲಕ್ಷ್ಮೀ ವರ ‘ಪ್ರಭುಂಪ್ರಾಣನಾಥಂ ವಿಭುಂವಿಶ್ವನಾಥಂ’ ಶಿವಸ್ತುತಿ ಗೀತೆಯನ್ನು ಪ್ರಸ್ತುತಪಡಿಸಿದರು. ದಿನದ ಮಹತ್ವವನ್ನು ಶ್ರೀಮತಿ ಹಂಸಾ ಅವರು ವಿವರಿಸಿದರು. ನಂತರ ಪ್ರಧಾನಾಚಾರ್ಯರು ಸಾಂಪ್ರದಾಯಿಕ ಪೂಜೆಯನ್ನು ನೆರವೇರಿಸಿದರು. ನೃತ್ಯ ಪ್ರದರ್ಶನಗಳು ಮತ್ತು ಪ್ರಸಿದ್ಧ ತಬಲವಾದಕ ಶ್ರೀ ಪರಮೇಶ್ವರ ಹೆಗಡೆ ಮತ್ತು ಮೃದಂಗ ವಾದಕ ಶ್ರೀ ವೆಂಕಟರಮಣ ಅವರಿಂದ ವಾದ್ಯ ಜುಗಲ್ಬಂದಿ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀಮತಿ ಹಂಸ ಶಿವರಾತ್ರಿಯ ಮಹತ್ವವನ್ನು ವಿಸ್ತಾರವಾಗಿ ವಿವರಿಸಿದರು. ವಿದ್ಯಾರ್ಥಿನಿ ವಿಧಾತ್ರಿ ಶಿವಸ್ತೋತ್ರವನ್ನು ಭಕ್ತಿಪೂರ್ವಕವಾಗಿ ಹಾಡಿದಳು. ದ್ವಿತೀಯ ತರಗತಿಯ ಮಕ್ಕಳು ‘ಶಿವನು ಭಿಕ್ಷಕ್ಕೆ ಬಂದ ನೀಡು ಬಾರೆ’ ಗೀತೆಯನ್ನು ಹಾಡಿದರು. ಶಾಲೆಯ ಕನ್ನಡ ಉಪಾಧ್ಯಾಯರಾದ ಮನೋಹರ್ ಅವರು ಆರನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಶಿವತಾಂಡವ ನೃತ್ಯವನ್ನು ಪ್ರದರ್ಶಿಸಿದರು. ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು.