International Yoga Day Celebration in RVK – Srinagar

Mysuru, June 21: International Yoga Day was celebrated herein Rashtrotthana Vidya Kendra – Srinagar School under the theme ‘Yoga for One World, One Health’. Dr. Murthy was present as the chief guest. The children performed yoga songs and yoga dances. The principal, Smt. Anita, taught the children the resolution of this day. Sri Harsha spoke about the importance of Yoga Day. Smt. Maithri, Sri Basavaraj, and Smt. Nandini recited shlokas and conducted yoga exercises. The Chief Guests, Dr. Murthy, informed them that the body and mind need five types of health. There should be positive thinking at every stage.

ಮೈಸೂರು, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರ ಶಾಲೆಯಲ್ಲಿ ʼಒಂದು ವಿಶ್ವ ಒಂದೇ ಆರೋಗ್ಯಕ್ಕಾಗಿ ಯೋಗʼ ಎಂಬ ಧ್ಯೇಯದಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಡಾ. ಮೂರ್ತಿ ಅವರು ಆಗಮಿಸಿದ್ದರು. ಮಕ್ಕಳು ಯೋಗ ಗೀತೆ, ಯೋಗ ನೃತ್ಯ ಪ್ರದರ್ಶಿಸಿದರು. ಪ್ರಧಾನಾಚಾರ್ಯರಾದ ಶ್ರೀಮತಿ ಅನಿತಾರವರು ಮಕ್ಕಳಿಗೆ ಈ ದಿನದ ಸಂಕಲ್ಪವನ್ನು ಬೋಧಿಸಿದರು. ಶ್ರೀ ಹರ್ಷರವರು ಯೋಗ ದಿನದ ಮಹತ್ವವನ್ನು ಹೇಳಿದರು. ಶ್ರೀಮತಿ ಮೈತ್ರಿ, ಶ್ರೀ ಬಸವರಾಜ್, ಶ್ರೀಮತಿ ನಂದಿನಿ ಅವರು ಶ್ಲೋಕಗಳನ್ನು ಹೇಳಿಸಿ ಯೋಗಾಭ್ಯಾಸಗಳನ್ನು ಮಾಡಿಸಿದರು. ಅತಿಥಿಗಳಾದ ಡಾ. ಮೂರ್ತಿ ಅವರು ದೇಹಕ್ಕೆ ಮನಸ್ಸಿಗೆ ಐದು ರೀತಿಯ ಆರೋಗ್ಯ ಬೇಕು. ಪ್ರತಿ ಹಂತದಲ್ಲೂ ಧನಾತ್ಮಕ ಚಿಂತನೆ ಇರಬೇಕು ಎಂದು ತಿಳಿಸಿಕೊಟ್ಟರು.

Scroll to Top