Mysuru, Nov. 23: Kartika Deepotsava was celebrated herein Rashtrotthana Vidya Kendra – Srinagar. Smt. Sadhana Tantri graced the program. The dignitaries offered prayers to Mother Cow, Sri Tulsi and Mother India. “Festivals are a reflection of our culture. Festivals in India are all about celebration. Our ancestors have been celebrating festivals according to the seasons” the Chief Guest said, explaining importance of festivals and the scientific benefits to the parents present. Later, in the cultural program, the school children performed Deepanjali dance, Matrubharti Mata sang the song, tabla, song by the music teachers and students, dance by the dance teacher, and dance performance by the teachers to the song of Sri Krishna. After that, everyone present lit a lamp to Bharat Mata and decorated the lamp stands in the Rangavalli.
ಮೈಸೂರು, ನ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಸಾಧನ ತಂತ್ರಿ ಅವರು ಆಗಮಿಸಿದ್ದರು. ಗಣ್ಯರು ಗೋಮಾತೆಗೆ, ಶ್ರೀ ತುಳಸಿಗೆ ಹಾಗೂ ಭಾರತಮಾತೆಗೆ ಪೂಜೆ ಸಲ್ಲಿಸಿದರು. “ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಭಾರತದಲ್ಲಂತೂ ಹಬ್ಬಗಳೆಂದರೆ ಸಂಭ್ರಮವೋ ಸಂಭ್ರಮ. ನಮ್ಮ ಪೂರ್ವಜರು ಋತುಮಾನಕ್ಕೆ ಅನುಗುಣವಾಗಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ” ಎನ್ನುತ್ತಾ, ಹಬ್ಬಗಳ ಮಹತ್ತ್ವವನ್ನು ತಿಳಿಸಿ, ವೈಜ್ಞಾನಿಕವಾಗಿ ಆಗುವ ಅನುಕೂಲಗಳನ್ನು ನೆರೆದಿದ್ದ ಪೋಷಕರುಗಳಿಗೆ ಮನಮುಟ್ಟುವಂತೆ ಮುಖ್ಯ ಅತಿಥಿಗಳು ತಿಳಿಸಿಕೊಟ್ಟರು. ತರುವಾಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ದೀಪಾಂಜಲಿ ನೃತ್ಯ, ಮಾತೃಭಾರತಿಯ ಮಾತೆಯರಿಂದ ಗಾಯನ, ತಬಲಾ, ಸಂಗೀತ ಶಿಕ್ಷಕರು ಮತ್ತು ವಿದ್ಯಾರ್ಥಿ ವೃಂದದಿಂದ ಗಾಯನ, ನೃತ್ಯ ಶಿಕ್ಷಕಿಯಿಂದ ನೃತ್ಯ ಹಾಗೂ ಶ್ರೀ ಕೃಷ್ಣನ ಹಾಡಿಗೆ ಶಿಕ್ಷಕಿಯರು ನೃತ್ಯ ಪ್ರದರ್ಶನವನ್ನು ನೀಡಿದ ನಂತರ ನೆರೆದಿದ್ದ ಎಲ್ಲರೂ ಭಾರತ ಮಾತೆಗೆ ದೀಪಾರತಿ ಮಾಡಿ ರಂಗವಲ್ಲಿಯಲ್ಲಿ ದೀಪದ ಹಣತೆಗಳನ್ನು ಅಲಂಕರಿಸಿದರು.