78th Independence Day in RVK – Sringar

“It is imperative that we preserve and nurture this land. We must advance our society in a manner that allows us to provide a meaningful legacy for future generations”: Sri Ananthakrishna: Independence Day, Rashtrotthana Vidya Kendra – Srinagar.

Mysuru, Aug 15: The 78th Independence Day was celebrated herein Rashtrotthana Vidya Kendra – Srinagar. Sri Anantha Krishna, campaigner of RSS, Mysuru Division, graced the program. The program was started by laying flowers and hoisting the flag. Students performed various cultural programs like dances and songs related to Rashtra Bhakti, Rashtra Prema. Sri Ananta Krishna emphasized that our nation is endowed with abundant resources, thanks to the sacrifices of numerous freedom fighters who secured our independence. It is imperative that we nurture and protect our land. Furthermore, he noted that children are increasingly prioritizing mobile devices over acquiring literacy skills, which adversely affects their health. We must strive to enhance our society to ensure that we can offer meaningful contributions to future generations. In conjunction with India’s progress, he urged that every citizen should embrace the notion of unity in diversity that characterizes our country.

“ಈ ಮಣ್ಣನ್ನು ನಾವು ಉಳಿಸಿ ಬೆಳೆಸಬೇಕು. ನಾವು ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆಯನ್ನು ಕೊಡುವಂತೆ ಸಮಾಜದ ಬೆಳವಣಿಗೆಯನ್ನು ಮಾಡಬೇಕು”: ಶ್ರೀ ಅನಂತಕೃಷ್ಣ: ಸ್ವತಂತ್ರ ದಿನಾಚರಣೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರ.

ಮೈಸೂರು, ಆಗಸ್ಟ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೈಸೂರು ವಿಭಾಗದ ಪ್ರಚಾರಕರಾದ ಶ್ರೀ ಅನಂತಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಪುಷ್ಪಾರ್ಚನೆ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ರಾಷ್ಟ್ರ ಭಕ್ತಿ, ರಾಷ್ಟ್ರ ಪ್ರೇಮಕ್ಕೆ ಸಂಬಂಧಿಸಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯಗಳು, ಹಾಡುಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.ಶ್ರೀ ಅನಂತಕೃಷ್ಣ ಅವರು ನಮ್ಮ ದೇಶ ಸಂಪತ್ಭರಿತ ದೇಶ, ಈ ದೇಶದಲ್ಲಿ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಈ ಮಣ್ಣನ್ನು ನಾವು ಉಳಿಸಿ ಬೆಳೆಸಬೇಕು. ಅಲ್ಲದೇ ಮಕ್ಕಳು ಓದು ಬರಹ ಕಲಿಯುವುದಕ್ಕಿಂತ ಹೆಚ್ಚಾಗಿ ಹೆಚ್ಚು ಮೊಬೈಲ್ ಬಳಕೆಯಾಗುತ್ತಿದೆ. ಇದರಿಂದಾಗಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ನಾವು ಮುಂದಿನ ಪೀಳಿಗೆಗೆ ಏನಾದರೂ ಕೊಡುಗೆಯನ್ನು ಕೊಡುವಂತೆ ಸಮಾಜದ ಬೆಳವಣಿಗೆಯನ್ನು ಮಾಡಬೇಕು. ಜೊತೆ ಜೊತೆಗೆ ಭಾರತದ ಅಭಿವೃದ್ಧಿಯನ್ನು ಮಾಡುತ್ತ, ಭಾರತವು ವಿವಿಧತೆಯಲ್ಲಿ ಏಕತೆ ಎಂಬ ಭಾವನೆ ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡಬೇಕು ಎಂದು ಮಾರ್ಗದರ್ಶನದ ನುಡಿಗಳನ್ನು ತಿಳಿಸಿದರು.

Scroll to Top