Mysuru, May 26: ‘Aksharabhyasa’ and ‘Vidyrambha’ program were held herein Rashtrotthana Vidya Kendra – Sringar.
ಮೈಸೂರು, ಮೇ 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ’ಅಕ್ಷರಾಭ್ಯಾಸ’ ಹಾಗೂ ‘ವಿದ್ಯಾರಂಭ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Under the guidance of Sri Aghaharananda Swamiji of Ramakrishna Ashram of Mysuru, the Aksharabhyasa ceremony was conducted for Pre-KG and LKG students. Parents started alphabet practice to their children by writing Omkara, Shrikara and Swastik on rice with turmeric stick. With Ganapati Shloka chanting Vidyarambha was performed for newly enrolled student.
ಶ್ರೀ ಅಘಹರಾನಂದ ಸ್ವಾಮೀಜಿ, ರಾಮಕೃಷ್ಣ ಆಶ್ರಮ, ಮೈಸೂರು, ಅವರು ಪ್ರೀ-ಕೆಜಿ ಹಾಗೂ ಎಲ್ಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ ನೀಡಿದರು. ಪೋಷಕರು ಕುಲದೇವರನ್ನು ನೆನೆಸಿ ಅಕ್ಕಿಯ ಮೇಲೆ ಅರಿಶಿನದ ಕೊಂಬಿನಿಂದ ಶ್ರೀಕಾರ, ಓಂಕಾರ ಹಾಗೂ ಸ್ವಸ್ತಿಕ ಚಿಹ್ನೆಯನ್ನು ಮಕ್ಕಳಿಂದ ಹೇಳಿಸುತ್ತಾ ಬರೆಸಿ, ಗಣಪತಿ ಶ್ಲೋಕದೊಂದಿಗೆ ವಿದ್ಯಾರಂಭವನ್ನು ಮಾಡಿಸಿದರು.
Shri Shripatiji, Vice President, Vidya Bharathi Karnataka Region and Principal, Smt. Anita D. were present during the occasion.
ಶ್ರೀ ಶ್ರೀಪತೀ ಜೀ, ವಿದ್ಯಾಭಾರತೀ ಕರ್ನಾಟಕ ಪ್ರ್ಯಾಂತದ ಉಪಾಧ್ಯಕ್ಷರು ಹಾಗೂ ಪ್ರಧಾನಾಚಾರ್ಯರಾದ ಶ್ರೀಮತಿ ಅನಿತಾ ಡಿ ಇವರು ಉಪಸ್ಥಿತರಿದ್ದರು.
Goddess Saraswati can be pleased with devotion – Sri Aghaharananda Swamiji
ಶ್ರದ್ಧೆ ಭಕ್ತಿಯಿಂದ ಸರಸ್ವತಿ ಒಲಿಯಲು ಸಾಧ್ಯ – ಶ್ರೀ ಅಘಹರಾನಂದ ಸ್ವಾಮೀಜಿ
We have to have good culture, value, morality with knowledge – Sri Shripatiji
ಜ್ಞಾನದ ಜೊತೆಗೆ ಸಂಸ್ಕಾರ, ನೈತಿಕತೆ, ಮೌಲ್ಯ, ಭಾವೈಕ್ಯತೆ ಇರಬೇಕು – ಶ್ರೀ ಶ್ರೀಪತೀ ಜೀ