Mysuru, Jan. 23: Vasant Panchami festival was celebrated herein Rashtrotthana Vidya Kendra – Srinagar. Goddess Saraswati was worshipped. Students of all classes brought fruits and vegetables from their homes as prasad and offered them to Goddess Saraswati. Children sang Saraswati Vandana songs in the classes. Students actively participated in activities like drawing, tying garlands, and making flower arrangements while displaying their artistic skills. The classes were beautifully decorated with flowers, pictures, and yellow decorations.
ಮೈಸೂರು, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಶ್ರೀನಗರದಲ್ಲಿ ವಸಂತ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಮಾತೆ ಸರಸ್ವತಿಯನ್ನು ಪೂಜಿಸಲಾಯಿತು. ಎಲ್ಲಾ ತರಗತಿಯ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ಹಣ್ಣು–ಹಂಪಲುಗಳನ್ನು ಪ್ರಸಾದವಾಗಿ ತಂದು ಸರಸ್ವತೀ ದೇವಿಗೆ ಅರ್ಪಿಸಿದರು ತರಗತಿಗಳಲ್ಲಿ ಮಕ್ಕಳು ಸರಸ್ವತೀ ವಂದನಾ ಗೀತೆಗಳನ್ನು ಹಾಡಿದರು. ವಿದ್ಯಾರ್ಥಿಗಳು ತಮ್ಮ ಕಲಾತ್ಮಕತೆಯನ್ನು ಪ್ರದರ್ಶಿಸುತ್ತಾ ಹಸೆ ಬರೆಯುವುದು, ತೋರಣ ಕಟ್ಟುವುದು, ಹೂವಿನ ಅಲಂಕಾರ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ತರಗತಿಗಳು ಹೂಗಳಿಂದ, ಚಿತ್ರಗಳಿಂದ ಹಾಗೂ ಹಳದಿ ಬಣ್ಣದ ಅಲಂಕಾರಗಳಿಂದ ಅತ್ಯಂತ ಮನಮೋಹಕವಾಗಿ ಸಿಂಗಾರಗೊಂಡಿದ್ದವು.



















