Mysuru, May 31: A literacy and commencement program was organised at Rashtrotthana Vidya Kendra – Srinagar.
• Sri Shadakshari Swamiji of Angala Math, Gundlupet presided over the divine presence.
• A. Nagendra Kamat, Rashtrotthana Parishat Yoga Head gracred the programme.
• Sri Satish performed the homa ceremony.
• Sri Shadakshari Swamiji and the guests were welcomed respectfully to the program with a Poorna Kumbha.
• Sri first taught literacy to the new students admitted in the year 2026 – 27.
• Sri started the commencement by teaching a shloka in homage to Saraswati.
• Sri, who gave the blessings, told the parents that “Our culture influences our children” and therefore we should preserve and cultivate our culture and traditions and teach them to our children as well.
• Speaking at the event, Sri A. Nagendra Kamath, the Convenor of Rashtrotthana Yoga Prakalpa, simply explained to everyone present in the meeting the birth, purpose and importance of Indianness and building a good personality in children.

ಮೈಸೂರು, ಮೇ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ -ಶ್ರೀನಗರದಲ್ಲಿ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
• ಗುಂಡ್ಲುಪೇಟೆಯ ಅಂಗಾಳ ಮಠದ ಶ್ರೀ ಷಡಕ್ಷರಿ ಸ್ವಾಮೀಜಿಗಳು ದಿವ್ಯಸಾನಿಧ್ಯವನ್ನು ವಹಿಸಿದ್ದರು.
• ರಾಷ್ಟ್ರೋತ್ಥಾನ ಪರಿಷತ್ತಿನ ಯೋಗವಿಭಾಗದ ಮುಖ್ಯಸ್ಥರಾದ ಶ್ರೀ ಎ. ನಾಗೇಂದ್ರ ಕಾಮತ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
• ಶ್ರೀ ಸತೀಶ್ ಅವರು ಹೋಮ ಕಾರ್ಯವನ್ನು ನೆರವೇರಿಸಿದರು.
• ಶ್ರೀಗಳನ್ನು ಮತ್ತು ಅತಿಥಿಗಳನ್ನು ಪೂರ್ಣಕುಂಭದೊಂದಿಗೆ ಗೌರವಪೂರ್ವಕವಾಗಿ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು.
• ಶ್ರೀಗಳು ಮೊದಲಿಗೆ 2026 – 27ನೇ ಸಾಲಿನಲ್ಲಿ ಪ್ರವೇಶಾತಿ ಪಡೆದ ಹೊಸ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸವನ್ನು ಬೋಧಿಸಿದರು.
• ಶ್ರೀಗಳು ಸರಸ್ವತಿಗೆ ನಮಿಸುವ ಶ್ಲೋಕವನ್ನು ಬೋಧಿಸುವುದರ ಮೂಲಕ ವಿದ್ಯಾರಂಭಕ್ಕೆ ಚಾಲನೆ ನೀಡಿದರು.
• ಆಶೀರ್ವಚನ ನೀಡಿದ ಶ್ರೀಗಳು “ನಮ್ಮ ಸಂಸ್ಕಾರಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ” ಆದ್ದರಿಂದ ನಾವು ನಮ್ಮ ಸಂಸ್ಕೃತಿ, ಆಚರಣೆಗಳನ್ನು ಉಳಿಸಿ ಬೆಳಿಸಿಕೊಂಡು ಹೋಗುವುದರ ಜೊತೆಗೆ ಮಕ್ಕಳಿಗೂ ಕಲಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
• ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಮುಖರಾದ ಶ್ರೀ ಎ ನಾಗೇಂದ್ರ ಕಾಮತ್ ಅವರು ಪರಿಷತ್ತಿನ ಹುಟ್ಟು, ಉದ್ದೇಶ ಹಾಗೂ ಭಾರತೀಯತೆ, ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣದ ಮಹತ್ವವನ್ನು ಸಭೆಯಲ್ಲಿ ನೆರೆದಿದ್ದ ಎಲ್ಲರಿಗೂ ಸರಳವಾಗಿ ತಿಳಿಸಿದರು.