Karnataka Rajyotsava Celebration in RVK – Srinagar

Mysuru, Nov. 6: Karnataka Rajyotsava was celebrated herein Rashtrotthana Vidya Kendra – Srinagar. A group dance performance was performed by the students of class 6 to the song ‘Baarisu Kannada Dindimavaa, O Karnataka Hridaya Shiva’. The students unitedly sang the song ‘Kannu Kandudellavanu Kannadisali Kannada, Kiviyu Undudellavanu Kannadisali Kannada’. Sri Manohar conducted a quiz program for the children using Kannada words as an alternative to English words. Then he created awareness and curiosity among the children by solving puzzles. The girls of class 6 and 7 sang the song ‘Kolu Kolanna Kole Kolu Kole A Kolu Kolanna Kole’. The chief guests Sri G. S. Ganesh gave an introductory speech and gave a detailed explanation about the culture of Kannada country, the way it has flowed and the subsequent development. He explained about the history of Kannada, details of modern Kannada poets, theater, Yakshagana, Doddata. By speaking Kannada at home, in public places, among neighbours, Kannada language was rooted in the people’s mind.The program was concluded by singing ‘Jaya Bharat Janani’s Tanujate’.

ಮೈಸೂರು, ನ. 6: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ಶ್ರೀನಗರದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ‘ಬಾರಿಸು ಕನ್ನಡ ಡಿಂಡಿಮವ, ಓ ಕರ್ನಾಟಕ ಹೃದಯ ಶಿವ’ ಹಾಡಿಗೆ 6ನೇ ತರಗತಿಯ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ ಪ್ರದರ್ಶನ ನಡೆಯಿತು. ‘ಕಣ್ಣು ಕಂಡುದೆಲ್ಲವನು ಕನ್ನಡಿಸಲಿ ಕನ್ನಡ, ಕಿವಿಯು ಉಂಡುದೆಲ್ಲವನು ಕನ್ನಡಿಸಲಿ ಕನ್ನಡ’ ಹಾಡಿಗೆ ವಿದ್ಯಾರ್ಥಿಗಳು ಒಗ್ಗೂಡಿ ಹಾಡಿದರು. ಶ್ರೀ ಮನೋಹರ್ ಅವರು ಮಕ್ಕಳಿಗೆ ಇಂಗ್ಲಿಷ್ ಪದಕ್ಕೆ ಪರ್ಯಾಯವಾದ ಕನ್ನಡ ಪದಗಳ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಒಗಟುಗಳನ್ನು ಬಿಡಿಸುವ ಮೂಲಕ ಮಕ್ಕಳಲ್ಲಿ ಅರಿವು ಮತ್ತು ಕುತೂಹಲವನ್ನು ಮೂಡಿಸಿದರು.‘ಕೋಲು ಕೋಲಣ್ಣ ಕೋಲೆ ಕೋಲು ಕೋಲೆ ಎ ಕೋಲು ಕೋಲಣ್ಣ ಕೋಲೆ’ ಹಾಡನ್ನು ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿನಿಯರು ಹಾಡಿದರು. ಮುಖ್ಯ ಅತಿಥಿಗಳಾದ ಶ್ರೀ ಜಿ. ಎಸ್. ಗಣೇಶ್ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ಕನ್ನಡ ನಾಡಿನ ಸಂಸ್ಕೃತಿ, ಅದು ಹರಿದು ಬಂದ ದಾರಿ, ನಂತರದ ಬೆಳವಣಿಗೆಯ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು. ಕನ್ನಡದ ಇತಿಹಾಸದ ಬಗ್ಗೆ, ಹೊಸಗನ್ನಡ ಕವಿಗಳ ವಿವರಗಳು, ರಂಗಭೂಮಿ, ಯಕ್ಷಗಾನ, ದೊಡ್ಡಾಟಗಳ ಬಗ್ಗೆ ವಿವರಿಸಿದರು. ಕನ್ನಡವನ್ನು ಮನೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ನೆರೆಹೊರೆಯವರಲ್ಲಿ, ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಜನಮಾನಸದಲ್ಲಿ ಬೇರೂರಬೇಕಾಗಿ ಹೇಳಿದರು. ಜಯ ಭಾರತ ಜನನಿಯ ತನುಜಾತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಸಮಾಪನಗೊಳಿಸಲಾಯಿತು.

Scroll to Top